ಕೇರಾಫ್ ಫುಟ್ಪಾತ್-ಭಾಗ೨ ಹಾಲಿವುಡ್‌ನಲ್ಲಿ
Posted date: 17 Tue, Nov 2015 – 07:22:48 AM

ಇತ್ತೀಚೆಗಷ್ಟೆ ಮಾ|| ಕಿಶನ್, ಹಾಲೀವುಡ್‌ಗೆ ನಿರ್ಮಾಪಕರಾದದೇವರಾಜ್ ಪಾಂಡೆ ಹಾಗೂ ಚಿತ್ರದ ನಾಯಕ ನಟ ದೀಪ್ ಪಾಠಕ್‌ನೊಂದಿಗೆತಮ್ಮಚಿತ್ರಕೇರಾಫ್ ಫುಟ್ಪಾತ್-ಭಾಗ೨ನ್ನುಆಸ್ಕರ್ ಸ್ಪರ್ಧೆಗೆಅಧಿಕೃತವಾಗಿ ಸೇರ‍್ಪಡೆ ಮಾಡಲುಅಮೇರಿಕದ ಲಾಸ್‌ಏಂಜಲೆಸ್‌ಗೆ ತೆರಳಿದ್ದರು.

ಕಿಶನ್ ಹೇಳಿಕೆ:
ನವೆಂಬರ್ ೬ ರಿಂದ ೧೨ನೇ ತಾರೀಖಿನವರೆಗೆಒಂದು ವಾರ ಲಾಸ್‌ಏಂಜಲೆಸ್‌ನ ಪಾಸಡಿನಾದಲ್ಲಿರುವ ಲೆಮ್ಲಿಚಿತ್ರಮಂದಿರದಲ್ಲಿಆಸ್ಕರ್quಚಿಟiಜಿಥಿiಟಿg ಡಿuಟಿ ಗಾಗಿಕೇರಾಫ್ ಫುಟ್ಪಾತ್-ಭಾಗ೨ ಚಿತ್ರವುತೆರೆಕಂಡಿತು.ಈ ಕನ್ನಡಚಿತ್ರವುಕರ್ನಾಟಕಕ್ಕೂ ಮುಂಚಿತವಾಗಿ ಲಾಸ್‌ಏಂಜಲೆಸ್‌ನಲ್ಲಿ ಬಿಡುಗಡೆಗೊಳ್ಳುತ್ತಿರುವ ವಿಷಯವನ್ನು ಫೇಸ ಬುಕ್ ಮೂಲಕ ತಿಳಿದುಕೊಂಡಿದ್ದ, ಅನಿವಾಸಿ ಭಾರತೀಯರು ಹಾಗೂ ಕನ್ನಡಿಗರು ಹೆಚ್ಚು ಸಂಖ್ಯೆಯಲ್ಲಿ ಸೇರಿಚಿತ್ರವನ್ನುಒಂದು ವಾರದ ಕಾಲ ಕೆಲವು ಆಸ್ಕರ್ ಸಮಿತಿಯ ಸದಸ್ಯರೊಂದಿಗೆ ವೀಕ್ಷಿಸಿದರುಎಂದುಕಿಶನ್‌ತಿಳಿಸಿದರು.
೨೦೦೭ ರಲ್ಲಿಕೇರಾಫ್ ಫುಟ್ಪಾತ್-ಭಾಗ೧ ಕ್ಕೆ, ಮಕ್ಕಳ ಆಸ್ಕರ್‌ಎಂದೇ ಪ್ರಸಿದ್ಧವಾಗಿರುವ ಜಿಫೋನಿ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಬಂದಾಗ, ಈ ಅವಾರ್ಡ್ ನನ್ನನ್ನು ನಿಜವಾದಆಸ್ಕರ್‌ಗೆ ಬಹಳ ಹತ್ತಿರಕೊಂಡೊಯ್ಯುತ್ತಿದೆಎಂದು ಹೇಳಿದ್ದ ಕಿಶನ್, ಈಗ ಆಸ್ಕರ್‌ಗಾಗಿಯೇ, ಮೊದಲಬಾರಿಅಮೆರಿಕದಲ್ಲಿನವೆಂಬರ್ ೫ರಂದು ಕಾಲಿಟ್ಟಾಗತನಗಾದಅನುಭವಅಪಾರ.ಒಂದುಕಡೆ ಭಯ, ಮತ್ತೊಂದುಕಡೆ ನಿರ್ದೇಶಕನೆಂಬ ಜವಾಬ್ದಾರಿ. ಈ ಭಾವನೆಗಳೋಡನೆ ವಿಮಾನ ನಿಲ್ದಾಣದಿಂದಹೊರ ಬಂದರೆ, ತಮ್ಮೆಲರಿಗಾಗಿಕಾಯುತ್ತಿದ್ದಅಲ್ಲಿಯಕನ್ನಡಿಗರು, ತನ್ನ ಭಾಷೆ, ತನ್ನಜನರನ್ನು ವಿದೇಶಿ ನೆಲೆಯಲ್ಲಿಯೂ ನೋಡಿದಾಗಆದ ಆಅನುಭವಅವರ್ಣನೀಯ... ಮಾತುಗಳೇ ಸಾಲದು.. .ಅಮೇರಿಕದಲ್ಲಿದ್ದರೂತಾನುಕರ್ನಾಟಕದಲ್ಲೆಇರುವ ಹಾಗೆ ಭಾವನೆ.
ಅಮೇರಿಕಕ್ಕೆಹೋದಮೊದಲ ದಿನವೇ ಲೆಮ್ಲಿಚಿತ್ರಮಂದಿರಕ್ಕೆ ಹೋಗಿ ಎಲ್ಲಾತಾಂತ್ರಿಕ ಗುಣಮಟ್ಟಗಳನ್ನು ಪರಿಶೀಲಿಸಿ, ಮಾರನೆಯ ದಿನದಂದುಯಾವುದೇ ತೊಂದರೆಗಳಿಲ್ಲದೆ ಅಕಾಡೆಮಿ ಸದಸ್ಯರಿಗೆಚಿತ್ರವುತೆರೆಕಾಣಬೇಕುಎಂದುಎಲ್ಲಾ ವಿಚಾರಗಳು ಸರಿಯಾಗಿದೆಎಂದು ಮನದಟ್ಟು ಮಾಡಿಕೊಂಡ ಮೇಲೆ, ಹೋಟೆಲಿಗೆ ಬಂದು ಮಲಗಿದರೂ, ಮಾರನೆಯ ದಿನದಚಿತ್ರಪ್ರದರ್ಶನದ ಬಗ್ಗೆ ಯೋಚಿಸಿಎದೆ, ಡವ್ವ, ಡವ್ವಎಂದು ಬಡಿದುಕೊಳ್ಳುತ್ತಿದ್ದುದರಿಂದಸ್ವಲ್ಪವೂ ನಿದ್ರೆಯೆ ಬರಲಿಲ್ಲವೆಂದು ಹೇಳುತ್ತಾರೆ ಕಿಶನ್.
ಒಂದು ಮಾತಿನಲ್ಲಿ ಹೇಳುವುದಾದರೇ ಇದೊಂದುಅದ್ಭುತವಾದಅನುಭವವೆಂದೂ, ತನ್ನಚಿತ್ರಕ್ಕೆಇಂತಹ ಒಳ್ಳೆ ಪ್ರತಿಕ್ರಿಯೆದೊರೆತಿದೆಯೆಂದು ಹಂಚಿಕೊಳ್ಳಲ ಬಹಳ ಖುಷಿಯಾಗಿದೆಎಂದರು.
ಹಾಗೆಯೇಅಮೇರಿಕದಲ್ಲಿ ನೆಲೆಸಿದ್ದ ವೆಂಕಿಯವರು, ಜ್ಯೋತಿಯವರು, ವಲೀಶ ಶಾಸ್ತರಿಯವರು, ಸುನಿತಾ ಪಾಟೀಲ್, ಮೈಕ್ ಮಲ್ಲಪ್ಪ. . . ಇನ್ನೂ ಹಲವರು,ತಮ್ಮೆಲ್ಲರಿಗೂ ಮಾಡಿದ ಸತ್ಕಾರ, ಎಲ್ಲದ್ದಕ್ಕೂ ಮಿಗಿಲಾಗಿ ದಿನಾ ಒಬ್ಬಕನ್ನಡಿಗರ ಮನೆಯಲ್ಲಿ ಊಟ, ಇವೆಲ್ಲವೂಕನ್ನಡ ಸೊಗಡು ಸದಾತನ್ನೊಂದಿಗೇಇರುವ ಭಾವನೆಯನ್ನು ಮೂಡಿಸಿತ್ತು ಎಂದು ತಿಳಿಸುತ್ತಾರೆ ಕಿಶನ್.
ನಿರ್ಮಾಪಕದೇವರಾಜ ಪಾಂಡೆ ಹೇಳಿಕೆ:
ಮೊದಲೇ ನಿಗಧಿಪಡಿಸಿದ್ದ ಅಮೇರಿಕದಚಿತ್ರವಿತರಕರು, ಬೇಕಾದಎಲ್ಲಾ ಜಾಹೀರಾತುಗಳನ್ನು ಪತ್ರಿಕೆಗಳಲ್ಲಿ ಕೊಟ್ಟಿದ್ದರಿಂದ, ಕನ್ನಡಿಗರು ಮಾತ್ರವೇಅಲ್ಲದೆ, ಅನೇಕ ಅನಿವಾಸಿ ತೆಲುಗು, ತಮಿಳು, ಹಿಂದಿ, ಗುಜರಾತಿ ಭಾಷೆಗಳನ್ನು ಮಾತನಾಡುವಜನರೂಚಿತ್ರ ವೀಕ್ಷಿಸಲು ಬಂದಿದ್ದರು.ಇವರೆಲ್ಲರಿಗೂಚಿತ್ರವು ಸಬ್-ಟೈಟಲ್ಡ್veಡಿsioಟಿ ಆಗಿದ್ದರಿಂದಎಲ್ಲರಿಗೂಚಿತ್ರದಕಥಾವಸ್ತುವು ಬಹಳ ಚೆನ್ನಾಗೆಅರ್ಥವಾಯಿತೆಂದು ಹಾಗೂ ತಮ್ಮ ಪ್ರಾಜೆಕ್ಟ್ ಪೈಲಟ್‌ಆದಕಿಶನ್‌ನ ಕೆಲಸದ ಮೇಲೆ ಮತ್ತು ಮೊದಲುಚಿತ್ರವನ್ನು ನೋಡಿದ ಪ್ರೇಕ್ಷಕರು ವಿಮರ್ಶೇಕೊಟ್ಟಮೇಲೆ, ಚಿತ್ರದ ಬಗ್ಗೆ ತಮಗೆಇನ್ನೂಅಪಾರ ಭರವಸೆ ಮೂಡಿದೆ, ಈ ಚಿತ್ರವು ಕಳೆದ ಚಿತ್ರದ ಹಾಗೆ ಇನ್ನೂ ಹೆಚ್ಚು ಯಶಸ್ವಿಯಾಗಲೆಂದು ಎಲ್ಲಕನ್ನಡಿಗರು ಆಶೀರ್ವದಿಸಬೇಕೆಂದು ನಿರ್ಮಾಪಕರಾದದೇವರಾಜ ಪಾಂಡೆಯವರುಕೇಳಿಕೊಂಡರು.
ವೀಕ್ಷಕರ ವಿಮರ್ಶೆ
ಮೊದಲ ದಿನ ಚಿತ್ರವೀಕ್ಷಿಸಿದ ಅನಿವಾಸಿಕನ್ನಡಿಗರುತಮ್ಮವಿಮರ್ಶಯನ್ನು ಹೀಗೆ ಹೇಳಿದ್ದಾರೆ -ಈ ಚಿತ್ರವುಒಂದುಎಮೊಷನಲ್-ಸಸ್ಪೆನ್ಸ್-ಥ್ರಿಲ್ಲರ್,ಚಿತ್ರದಕಥಾವಸ್ತುವು ಹೊಸದಾಗಿದೆ, ಪಾತ್ರಧಾರಿಗಳು ತಮ್ಮ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಚಿತ್ರಕಥೆಯು ಪ್ರೇಕ್ಷಕನನ್ನುಕೊನೆಯ ಹಂತದವರೆಗೂತುದಿಗಾಲಲ್ಲಿ ಹಿಡಿದಿಡುತ್ತದೆ, ಮುಂದೇನಾಗಬಹುದು ಎಂಬ ಕುತೂಹಲ ಅದ್ಭುತವಾಗಿದೆ, ಎಂದು ಬಗೆ ಬಗೆಯ ವಿಮರ್ಶೆ ನೀಡಿರುತ್ತಾರೆ. ಚಿತ್ರಕ್ಕೆ, ತಮ್ಮತಮ್ಮ ಅನಿಸಿಕೆಯಂತೆ ೪.೫/೫, ೫/೫ ಎಂದುರೇಟಿಂಗ್ ನೀಡಿದ್ದಾರೆ.



GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed